ಕನ್ನಡದಲ್ಲಿ ಫೆಡೋರಾ
From Kannada l10n Wiki
This page is still a draft. You can help by adding information to it
ಫೆಡೋರಾ ಎಂದರೆ ನಿಜದ ಅರ್ಥದಲ್ಲಿ ಒಂದು ಮೆತ್ತನೆಯ ಟೊಪ್ಪಿಗೆ ಎಂದಾಗುತ್ತದೆ.ಆದರೆ ಇಲ್ಲಿ ತಿಳಿಸಲಾದ ಫೆಡೋರಾವು ಒಂದು ಲಿನಕ್ಸ್ ಆಧರಿತ ಕಾರ್ಯವ್ಯವಸ್ಥೆಯಾಗಿದೆ. ಮುಕ್ತ ಆಕರ(ಓಪನ್‍ಸೋರ್ಸ್) ಜಗತ್ತಿನಲ್ಲಿ ಪ್ರಖ್ಯಾತವಾಗಿರುವ ಮುಕ್ತ ಕಾರ್ಯವ್ಯವಸ್ಥೆಗಳಲ್ಲಿ ಫೆಡೋರಾ ಸಹಾ ಒಂದು. ಇದನ್ನು ಯಾರು ಬೇಕಾದರೂ ಉಚಿತವಾಗಿ ಬಳಸುವುದಲ್ಲದೆ, ಮಾರ್ಪಡಿಸಿ ಹಾಗು ಮರುವಿತರಿಸಬಹುದಾಗಿದೆ.ಇದು ಫೆಡೋರಾ ಪರಿಯೋಜನೆಯಲ್ಲಿ(ಫೆಡೋರ ಪ್ರಾಜೆಕ್ಟ್)ಒಂದು ಸಮುದಾಯವಾಗಿ ಕೆಲಸ ಮಾಡುವ ಜನರಿಂದ ಬೆಳೆದಿದೆ ಹಾಗು ಇನ್ನೂ ಬೆಳೆಯುತ್ತಿದೆ.ಈ ಪರಿಯೋಜನೆ ಒಂದು ಭಾಗವಾಗಿ "ಕನ್ನಡದಲ್ಲಿ ಫೆಡೋರಾ" ಕಾರ್ಯವೂ ಸಹ ನಡೆಯುತ್ತಿದ್ದು ಅದರಲ್ಲಿ ನೀವೂ ಸಹ ಪಾಲ್ಗೊಳ್ಳಬಹುದಾಗಿದೆ. ಕನ್ನಡದಲ್ಲಿ ಒಂದು ಉತ್ತಮವಾದ ಉಚಿತ ಕಾರ್ಯವ್ಯವಸ್ಥೆಯನ್ನು ಹೊರತರುವಲ್ಲಿ ಹಲವಾರು ಸಮಾನ ಮನಸ್ಕ ಆಸಕ್ತ ಅನುವಾದಕರ ಅಗತ್ಯವಿದೆ.
ಫೆಡೋರಾ ಬಗೆಗಿನ ಹೆಚ್ಚಿನ ವಿವರಗಳಿಗೆ ಹಾಗು ಈ ಪರಿಯೋಜನೆಯಲ್ಲಿ ಪಾಲ್ಗೊಳ್ಳಲು ಈ ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ. http://fedoraproject.org/wiki/L10N/
ಫೆಡೋರಾ ಲೋಕಲೈಸೇಶನ್ ಬಗ್ಗೆ ನಿಮಗೆ ಏನಾದರೂ ಅನುಮಾನ ಇದ್ದಲ್ಲಿ ಅದನ್ನು ಪರಿಹರಿಸಿಕೊಳ್ಳಲು, ಐಆರ್ಸಿಯಲ್ಲಿ, freenode ಚ್ಯಾನಲ್ಲಿನಲ್ಲಿನ #fedora-l10n ನಲ್ಲಿ ಸೇರುವುದರಿಂದ ಸಂಬಂಧ ಪಟ್ಟ ವ್ಯಕ್ತಿಗಳನ್ನು ಸುಲಭವಾಗಿ ಸಂಪರ್ಕಿಸಬಹುದು.
By project leader A S Alam : Kannada has good status this time for Fedora as Fonts are available, Input method available, so it is really good idea to check Latest Build.
Not sure about this one. They had come up with Lohit Kannada, right? is the font completely usable? - HPN

